ಅಮೃತಮಯಿ ಜಲ
ಪ್ರಕೃತಿ ಹಾಗು ಮಾನವ ಅವಿನಾಭಾವ ಸಂಭAದ ಹೊಂದಿದ್ದಾರೆ.ಪೃಕೃತಿಯ ಪರಿಸರದಿಂದ ಮಾನವನ ಜನ್ಮ ಉಂಟಾಗಿದೆ.ಪAಚ ಮಹಾಭೂತಗಳಿಂದ ಪ್ರಕೃತಿಯ ನಿರ್ಮಾಣವಾಗಿದೆ.ಪೃಥ್ವಿ(ಭೂಮಿ),ಆಪ್(ನೀರು) ,ತೇಜ(ಅಗ್ನಿ)ವಾಯು(ಗಾಳಿ),ಹಾಗೂ ಆಕಾಶ ಎಂಬ 5 ತತ್ವಗಳೇ ಪಂಚ ಮಹಾಭೂತಗಳು.ಇವುಗಳಿಂದಲೆ ಪ್ರಕೃತಿ ಹಾಗೂ ಮಾನವನ ನಿರ್ಮಾಣ ಆಗಿದೆ. ಪ್ರಕೃತಿಯು ಮಾನವನ ಅನುಕೂಲಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸಿದೆ. ಪ್ರಕೃತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಮಾನವನ ಧರ್ಮ ಹಾಗೂ ಕರ್ತವ್ಯ ಕೂಡ.
ನೀರು ಆಹಾರಕ್ಕಿಂತ ಅಧಿಕ ಮಹತ್ವ ಹೊಂದಿದೆ. ನಮಗಷ್ಟೇ ಅಲ್ಲ ಜಗದ ಸಕಲ ಜೀವಿಗಳ ಜೀವಾಧಾರ ನೀರು. ನೀರು ಅತ್ಯವಶ್ಯವಾದಂತಹ ಸಂಪನ್ಮೂಲವಾಗಿದೆ. ಭೂ ಮಂಡಲದ ಶೇ. 71 ರಷ್ಟು ಭಾಗವು ನೀರಿನಿಂದ ಆವೃತವಾಗಿದ್ದರೂ, ಶೇ. 96.5 ಸಮುದ್ರದಲ್ಲಿ ಶೇಖರಗೊಂಡಿದೆ. ಶೇ 3.5 ಮಾತ್ರ ಶುದ್ಧ ನೀರಿನ ರೂಪದಲ್ಲಿದೆ. ಈ ನೀರು ಸರೋವರ, ಮಂಜುಗಡ್ಡೆ, ಹಿಮನದಿ, ಅಂತರ್ಜಲಗಳಲ್ಲಿ ಶೇಖರಗೊಂಡಿದೆ. ಭೂಮಿಯ ಬಹುಪಾಲು ನೀರಿನಿಂದ ಆವೃತವಾಗಿದ್ದರೂ ಬಳಕೆಗೆ ಸಿಗುವ ನೀರು ಶೇ. 0.4 ಮಾತ್ರ ಆಗಿದೆ.
ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಮತ್ತು ಪಂಚ ವiಹಾಭೂತಗಳಲ್ಲಿ ಎರಡನೇಯದಾಗಿ ಹೇಳಲ್ಪಟ್ಟ ‘ಆಪ್’ ತತ್ವ ಸಾಮಾನ್ಯವಾಗಿ ಜಲ, ನೀರು, ಉದಕ ಎಂಬ ಅನೇಕ ಹೆಸರಿನಿಂದ ಕರೆಯಲ್ಪಡುವುದು.ಆಯುರ್ವೇದದಲ್ಲಿ ಕೂಡಾ ದ್ರವ ಪ್ರಧಾನ ವಸ್ತುಗಳ ವರ್ಗೀಕರಣ ಮಾಡುವಾಗ ಜಲಕ್ಕೆ ಪ್ರಥಮ ಆಧ್ಯತೆ ನೀಡಿದ್ದಾರೆ.
ತೋಯ ಕ್ಷೀರೇಕ್ಷÄ ತೈಲಾನಾಂ ವರ್ಗರ್ಯೈ ಮಧ್ಯಸ್ಥ ಚ ಕ್ರಮಾತ್|
ಅಂದರೆ ನೀರು, ಹಾಲು, ತೈಲ, ಮಧ್ಯ, ಇತ್ಯಾದಿ ದ್ರವ ಪ್ರಧಾನ ವರ್ಗಗಳಲ್ಲಿ ಮೊದಲು ನೀರಿನ ವರ್ಗಕ್ಕೆ ಮಹತ್ವ ನೀಡಿದ್ದಾರೆ. ಅಲ್ಲದೇ,
ಪಾನೀಯಂ ಪ್ರಾಣಿನಾಂ ಪ್ರಾಣಃ ವಿಶ್ವಮೇವಚ ತನ್ಮಯಂ |
ಎಂದು ಹೇಳುವುದರ ಮೂಲಕ ನೀರು ಎಲ್ಲ ಜೀವರಾಶಿಗಳ, ಸಸ್ಯ ಸಂಕುಲದ ಪ್ರಾಣವೇ ಆಗಿದ್ದು, ಸಂಪೂರ್ಣ ಜಗತ್ತೇ ನೀರನ್ನು ಅವಲಂಬಿಸಿದೆ. ಹೀಗೆ ಬದುಕಿನ ಪ್ರಾಥಮಿಕ ಆವಶ್ಯಕತೆಗಳಲ್ಲಿ ಒಂದಾದ ನೀರಿನ ಗುಣ, ಪ್ರಕಾರ, ಕುಡಿಯಲು ಯೋಗ್ಯವಾದ ನೀರು, ನೀರನ್ನು ಸೇವಿಸುವ ಸಮಯ, ರಕ್ಷಣಾತ್ಮಕ ಕ್ರಮಗಳು, ಪುನರ್ಬಳಕೆ ಕ್ರಮ, ದುರ್ಬಳಕೆ ತಡೆಗಟ್ಟುವ ವಿಧಾನ ಇತ್ಯಾದಿಗಳನ್ನು ವಿವರವಾಗಿ ತಿಳಿದರೆ ನೀರಿನ ಮಹತ್ವ ನಮಗೆ ಗೊತ್ತಾಗುವುದು.
ನೀರಿನ ಗುಣ :
ಆಯುರ್ವೇದ ಗ್ರಂಥಗಳಲ್ಲಿ ಒಂದಾದ ಅಷ್ಟಾಂಗ ಹೃದಯದಲ್ಲಿ ನೀರಿನ ಗುಣಗಳ ಬಗ್ಗೆ ಈ ರೀತಿಯಾಗಿ ಹೇಳಲ್ಪಟ್ಟಿದೆ.
ಜೀವನಂ ತರ್ಪಣಂ ಹೃಧೃಂ ಹ್ಲಾದಿ ಬುದ್ದಿ ಪ್ರಭೋದನಂ |
ತನ್ವ ವ್ಯಕ್ತ ರಸಂ ಮೃಷ್ಟಮ ಶೀತಂ ಲಘ್ವಮೃತೋಪಮಂ ||
- ಜೀವನಂ : ನೀರು ,ಜಲವು ಎಲ್ಲ ಜೀವಿಗಳ ಪ್ರಾಣ ಧಾರಣೆ ಮಾಡುವದು.
- ತರ್ಪಣಂ : ತೃಪ್ತಿಯನ್ನುಂಟು ಮಾಡುವುದು
- ಹೃದ್ಯಂ : ಹೃದಯಕ್ಕೆ ಹಿತಕರವಾದುದು
- ಹ್ಲಾದಿ : ಮನಸ್ಸಿಗೆ ಆಹ್ಲಾದವನ್ನಂಟು ಮಾಡುವದು.
- ಬುದ್ದಿ ಪ್ರಭೋದನ : ಬುದ್ದಿಯ ತಿಳುವಳಿಕೆ ಹೆಚ್ಚಾಗುವದು.(ಪ್ರಜ್ಞೆ ತಪ್ಪಿದಾಗ,ಎಚ್ಚರಿಸಲು ನೀರನ್ನು ಸಿಂಪಡಿಸುವದು)
- ತನು : ತೆಳುವಾಗಿದ್ದು,ಹರಡುವ ಗುಣ ಹೊಂದಿದೆ.
- ಅವ್ಯಕ್ತ ರಸ : ಯಾವದೇ ತರಹದ ರುಚಿ ಇಲ್ಲದಿರುವಿಕೆ.
- ಮೃಷ್ಟಂ : ನಾಲಿಗೆಗೆ ಅತ್ಯಂತ ಪ್ರೀಯವಾದದ್ದು.
- ಶೀತ : ಸ್ಪರ್ಷಕ್ಕೆ ಹಾಗು ಗುಣದಿಂದ ಶೀತ.
- ಲಘು : ಜೀರ್ಣಕ್ಕೆ ಹಗುರ ಗುಣ ಹೊಂದಿದೆ.
- ಅಮೃತೋಪಮಮ್ : ನೀರು ಅಮೃತಕ್ಕೆ ಸಮಾನವಾಗಿದೆ. ***ಡಾ ಸುಚೇತಾ ನಾಗರಾಜ ಮದ್ಗುಣಿ
ಡಾ. ಮದ್ಗುಣಿ ಆಯುರ್ ಸೇವಾ ಭವನ
ಶಿರಸಿ ರಸ್ತೆ ಯಲ್ಲಾಪುರ 8088008754